ಕೊರಿನ್ನ	
ಕ್ರಿ.ಪೂ. ಸುಮಾರು ಆರನೆಯ ಶತಮಾನದಲ್ಲಿದ್ದಳೆಂದು ಹೇಳಲಾದ ಗ್ರೀಕ್ ಕವಯಿತ್ರಿ. ಕವಿ ಪಿಂಡರನ ಸಮಕಾಲೀನಳು. ಈಕೆ ಬೀಓಷಿಯದ ಪ್ರಾಚೀನಕಾಲದ ಮುಖ್ಯಪಟ್ಟಣವೆನಿಸಿದ ಟನಗ್ರದವಳು. ಬೀಓಷಿಯನ್ ಜಾನಪದ ಹಾಗೂ ಗ್ರೀಕ್ ಪುರಾಣಗಳಿಗೆ ಸಂಬಂಧಿಸಿದಂತೆ ಕಥಾವಸ್ತುಗಳನ್ನು ಆರಿಸಿಕೊಂಡು ಬೀಓಷಿಯನ್ ಭಾಷೆಯಲ್ಲಿ ಬರೆದವರಲ್ಲಿ ಅಗ್ರಮಾನ್ಯಳು. ಪಿಂಡರನನ್ನು ಖಂಡಿಸಿ ಆತನಿಂದ ಹೆಣ್ಣುಹಂದಿ ಎಂಬ ಅಪವಾದಕ್ಕೆ ಪಕ್ಕಾದಳು. ಈಗ ಉಳಿದಿರುವ ಆಕೆಯ ಸಾಹಿತ್ಯ ಅವಶೇಷಗಳಲ್ಲಿ ಗ್ರೀಕ್ ಪುರಾಣಕ್ಕೆ ಸಂಬಂಧಿಸಿದ ಕಥಾವಸ್ತುವನ್ನು ಕಾಣಬಹುದು. 								 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ